ಅಭಿಪ್ರಾಯ / ಸಲಹೆಗಳು

ಟ್ರಾಫಿಕ್‌ ಅಟೋಮೇಷನ್‌ ಸೆಂಟರ್‌

ಟ್ರಾಫಿಕ್ ಅಟೋಮೇಶನ್ ಸೆಂಟರ್, ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯಲ್ಲಿ ಸುಗಮ ರಸ್ತೆ ಸಂಚಾರ ವ್ಯವಸ್ಥೆ ಹಾಗೂ ಸಂಚಾರ ನಿಯಂತ್ರಣಕ್ಕಾಗಿ ಟ್ರಾಫಿಕ್ ಅಟೋಮೇಶನ್ ತಂತ್ರಾಂಶ ವ್ಯವಸ್ಥೆಯನ್ನು ದಿನಾಂಕ:23-04-2018 ರಿಂದ ಅನುಷ್ಠಾನಗೊಳಿಸಲಾಗಿದೆ. ಸದರಿ ತಂತ್ರಾಂಶವನ್ನು ಬಳಸಿ ಶಿವಮೊಗ್ಗ ನಗರದ ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮರಾಗಳ ಸಹಾಯದಿಂದ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವ ವಾಹನಗಳ ಪೋಟೋಗಳನ್ನು ತೆಗೆಯಲಾಗುತ್ತದೆ ಹಾಗೂ ಭದ್ರಾವತಿ ಹಾಗೂ ಶಿವಮೊಗ್ಗ ನಗರದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುವ ವಾಹನ ಸವಾರರ ಪೋಟೋಗಳನ್ನು ಸಂಚಾರಿ ಕರ್ತವ್ಯವನ್ನು ನಿರ್ವಹಿಸುವ ಪೊಲೀಸರು ಪೋಟೋ ತೆಗೆದು ಪೊಲೀಸ್ ಠಾಣೆಗೆ ನೀಡುತ್ತಾರೆ. ಸಿಸಿ ಟಿವಿ ಕಂಟ್ರೂಲ್ ರೂಂ ಮತ್ತು ಠಾಣೆಯ ಕಂಪ್ಯೂಟರ್ ಸಿಬ್ಬಂದಿಗಳು ಸದರಿ ಪೋಟೋಗಳನ್ನು ತಂತ್ರಾಂಶದ ಫೀಲ್ಡ್ ಟ್ರಾಫಿಕ್ ವೈಲೇಶನ್ ರಿಪೋರ್ಟ್‌ (FTVR) ನಲ್ಲಿ ಭರ್ತಿ ಮಾಡಿ ಪೋಟೋಗಳನ್ನು ಟ್ರಾಫಿಕ್ ಅಟೋಮೇಶನ್ ಡಾಟಾಬೇಸ್‌ಗೆ ಅಪ್ಲೋಡ್ ಮಾಡುತ್ತಾರೆ. ನಂತರ ಅಟೋಮೇಶನ್ ಸೆಂಟರ್ ನಲ್ಲಿ ನೋಟಿಸ್‌ಗಳನ್ನು RTO DATA BASE ಸಹಾಯದಿಂದ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ವಾಹನದ ಮಾಲೀಕರ ವಿಳಾಸವನ್ನು ಪಡೆದು,  ಅಂಚೆಯ ಮುಖಾಂತರ ಮಾಲೀಕರ ವಿಳಾಸಕ್ಕೆ ನೊಟೀಸ್‌ಗಳನ್ನು ಕಳುಹಿಸಲಾಗುವುದು.

ನಿಯಮ ಉಲ್ಲಂಘನೆ ಮಾಡಿ ವಾಹನ ಚಾಲಕರು/ಮಾಲೀಕರು ದಂಡದ ಮೊತ್ತವನ್ನು ಪೂರ್ವ ಸಂಚಾರಿ ಪೊಲೀಸ್ ಠಾಣೆ ಶಿವಮೊಗ್ಗ, ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಶಿವಮೊಗ್ಗ , ಭದ್ರಾವತಿ ಸಂಚಾರಿ ಪೊಲೀಸ್ ಠಾಣೆ, ಟ್ರಾಫಿಕ್ ಅಟೋಮೇಶನ್ ಸೆಂಟರ್ ಶಿವಮೊಗ್ಗ, ಶಿವಮೊಗ್ಗ ಓನ್ ಕೇಂದ್ರಗಳಲ್ಲಿ ಹಾಗೂ ಕರ್ನಾಟಕ ಒನ್ ಸೇವೆಯಲ್ಲಿ ಅನ್‌ಲೈನ್ ಮೂಲಕ ಸಂದಾಯ ಮಾಡಬಹುದಾಗಿದೆ. ನಿಯಮನುಸಾರ ದಂಡ ವಸೂಲಿ ಮಾಡಿ ಸರ್ಕಾರಕ್ಕೆ ಜಮಾ ಮಾಡಲಾಗುತ್ತಿದೆ.

ಇತ್ತೀಚಿನ ನವೀಕರಣ​ : 27-12-2020 12:29 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಶಿವಮೊಗ್ಗ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ