ಅಭಿಪ್ರಾಯ / ಸಲಹೆಗಳು

ಓಬವ್ವ ಪಡೆ

ಓಬವ್ವ ಪಡೆ

ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಮಹಿಳೆಯರ ಸುರಕ್ಷತೆಗಾಗಿ ಶಿವಮೊಗ್ಗ ನಗರದಲ್ಲಿ ದಿನಾಂಕ 15-07-2016 ರಂದು ಓಬವ್ವ ಪಡೆಯನ್ನು ರಚಿಸಿ ಕಾರ್ಯರೂಪಕ್ಕೆ ತಂದಿದ್ದು, ಸದರಿ ಪಡೆಗೆ 2 ಗಸ್ತು ವಾಹನಗಳನ್ನು ಮತ್ತು ಪಿಎಸ್ಐ ಹಾಗೂ ಮಹಿಳಾ ಸಿಬ್ಬಂದಿಗಳನ್ನು ನೇಮಕ ಮಾಡಿ ಶಿವಮೊಗ್ಗ ನಗರದ ಶಾಲಾ ಕಾಲೇಜು, ಹಾಸ್ಟೆಲ್, ಪಾಕರ್್ ಮತ್ತು ಬಸ್ ನಿಲ್ದಾಣದ ಕಡೆಗಳಲ್ಲಿ ಗಸ್ತು ಮಾಡಿ ಮಹಿಳೆಯರನ್ನು, ಹೆಣ್ಣು ಮಕ್ಕಳನ್ನು ಚುಡಾಯಿಸುವ ಮತ್ತು ಅಸಭ್ಯವಾಗಿ ವತರ್ಿಸುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.

ದಿನಾಂಕ 02-05-2019 ರಂದು ಓಬವ್ವ ಪಡೆಗೆ ಮರು ಚಾಲನೆ ನೀಡಿದ್ದು, ಸದರಿ ಪಡೆಗೆ 2 ಗಸ್ತು ವಾಹನ ಮತ್ತು ಮಹಿಳಾ ಸಿಬ್ಬಂದಿಗಳನ್ನು ಗಸ್ತು ಕಾರ್ಯಕ್ಕೆ ನಿಯೋಜಿಸಲಾಗಿರುತ್ತದೆ. ಪೊಲೀಸ್ ಇನ್ಸ್ಪೆಕ್ಟರ್ ಮಹಿಳಾ ಠಾಣೆರವರು ಇದರ ಉಸ್ತುವಾರಿ ಅಧಿಕಾರಿಗಳಾಗಿರುತ್ತಾರೆ. ಸದರಿ ವಾಹನಗಳಿಗೆ ನೇಮಕವಾದ ಸಿಬ್ಬಂದಿಯವರು ಮಫ್ತಿಯಲ್ಲಿ ಗಸ್ತು ನಿರ್ವಹಿಸುತ್ತಿರುತ್ತಾರೆ. ಓಬವ್ವ ಪಡೆ ವಾಹನಗಳ ಕಾರ್ಯ ವ್ಯಾಪ್ತಿಯನ್ನು 2 ವಿಭಾಗಗಳಾಗಿ ವಿಂಗಡಿಸಿದೆ.

ಓಬವ್ವ ಪಡೆ-1 ವಾಹನವು ಶಿವಮೊಗ್ಗ ನಗರದ ಜಯನಗರ ಮತ್ತು ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತು ಓಬವ್ವ ಪಡೆ-2 ವಾಹನವು ದೊಡ್ಡಪೇಟೆ, ವಿನೋಬ ನಗರ, ಮತ್ತು ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ ಗಸ್ತು ನಡೆಸಲಿದ್ದು, ಶಾಲಾ ಕಾಲೇಜು ಬಳಿ ರಸ್ತೆಯಲ್ಲಿ ಹೆಣ್ಣು ಮಕ್ಕಳನ್ನು ಚುಡಾಯಿಸುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ನಿಯೋಜಿಸಲಾಗಿದೆ.

 

OBAVVA PADE

 

 

ಇತ್ತೀಚಿನ ನವೀಕರಣ​ : 27-12-2020 12:22 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಶಿವಮೊಗ್ಗ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ