ಅಭಿಪ್ರಾಯ / ಸಲಹೆಗಳು

ಸಿಸಿ ಕ್ಯಾಮರ ಕಣ್ಗಾವಲು

ಸಿಸಿ ಕ್ಯಾಮರ ಮಾನಿಟರಿಂಗ್ ಸೆಂಟರ್, ಶಿವಮೊಗ್ಗ

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಸ್ಮಾಟ್ ಸಿಟಿ ಯೋಜನೆಯಡಿ 2016 ನೇ ಸಾಲಿನಲ್ಲಿ ನಾಗರೀಕರ ಹಿತರಕ್ಷಣೆ ಮತ್ತು ಕಾನೂನು ಸುವ್ಯವಸ್ಥೆ ಹಾಗೂ ಪ್ರಾಣ ಅಸ್ತಿ, ಮತ್ತು ರಕ್ಷಣೆ ಸಂಬಂಧ ಸಾರ್ವಜನಿಕ ಮತ್ತು ಅಡಳಿತ ಸುವ್ಯವಸ್ಥೆಗೆ ಅನುಕೂಲವಾಗುವಂತೆ ಮೊದಲನೆ ಹಂತದಲ್ಲಿ 20 ಪಿಟಿಜೆಡ್ ಕ್ಯಾಮರಾಗಳು ಮತ್ತು 70 ಸಂಖ್ಯೆ ಬುಲೆಟ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ನಂತರ 2 ನೇ ಹಂತದಲ್ಲಿ 02 ಪಿಟಿಜೆಡ್ ಕ್ಯಾಮರಾಗಳು ಮತ್ತು 18 ಸಂಖ್ಯೆ ಬುಲೆಟ್ ಕ್ಯಾಮರಾಗಳನ್ನು ಅಳವಡಿಸಿದೆ. ಜಿಲ್ಲಾ ಪೊಲೀಸ್ ಕಛೇರಿಯಲ್ಲಿರುವ ಜಿಲ್ಲಾ ನಿಯಂತ್ರಣ ಕೊಠಡಿಯ ಮಾನಿಟರಿಂಗ್ ಸೆಂಟರ್ನಲ್ಲಿ ಪ್ರಮುಖ ವೃತ್ತಗಳಲ್ಲಿರುವ ಪಿಟಿಜೆಡ್ ಸಿಸಿ ಕ್ಯಾಮರಾಗಳನ್ನು ನಿಯಂತ್ರಿಸಲಾಗುತ್ತಿದೆ. ಎಲ್ಲಾ ಕ್ಯಾಮರಾಗಳ ಚಿತ್ತಿಕರಣವನ್ನು ನೋಡಲು ಮತ್ತು ನಿಯಂತ್ರಿಸಲು ಒಟ್ಟು 08 ವಿಡೀಯೋ ವಾಲ್ಗಳನ್ನು ಅಳವಡಿಸಲಾಗಿರುತ್ತದೆ. ಒಂದೇ ಬಾರಿ ಎಲ್ಲಾ ಕ್ಯಾಮರಾಗಳ ಚಿತ್ರೀಕರಣವನ್ನು ನೋಡಬಹುದಾಗಿರುತ್ತದೆ. ಹಾಗೂ 30 ದಿನಗಳವರೆಗೆ ಚಿತ್ರೀಕರಿಸಿದ ವಿಡಿಯೋಗಳನ್ನು ಸಂಗ್ರಹಿಸಿಡಲಾಗುತ್ತಿದೆ.

ವಿಡಿಯೋವಾಲ್ ಮತ್ತು ರೆಕಾಡರ್ಿಂಗ್ ಉಪಕರಣಗಳ ಉಷ್ಣತೆಯನ್ನು ಕಾಪಾಡಲು ಹವಾನಿಯಂತ್ರಣ ಉಪಕರಣಗಳನ್ನು ಅಳವಡಿಸಲಾಗಿದೆ ಕ್ಯಾಮಾರಗಳ ವೀಕ್ಷಣೆ ಮತ್ತು ಟ್ರಾಫಿಕ್ ವೈಲೇಷನ್ಗೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸಲು ಸಿಬ್ಬಂದಿಯನ್ನು ನೇಮಿಸಲಾಗಿದೆ.

ಸಿಸಿ ಕ್ಯಾಮರಾಗಳಿಂದ ಶಿವಮೊಗ್ಗ ನಗರದಲ್ಲಿ ವಾಹನಗಳ ಕಳವು, ಮನೆ ಕಳವು, ಇನ್ನಿತರ ಅಪರಾಧಗಳನ್ನು ನಿಗ್ರಹಿಸಬಹುದಾಗಿದೆ. ಹಬ್ಬ ಹರಿದಿನ, ಜಾತ್ರೆ ಸಮಾರಂಭಗಳಲ್ಲಿ ಗಲಾಟೆ ಅಥವಾ ಗಲಭೆಗಳನ್ನು ನಿಯಂತ್ರಿಸಲು ಅನುಕೂಲವಾಗುತ್ತಿದೆ. ಮೆರವಣಿಗೆ , ಜಾಥಾ, ಪ್ರತಿಭಟನೆ, ಮುಷ್ಕರಗಳಂತಹ ಸಂದರ್ಭದಲ್ಲಿ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ಸಹಾಯಕವಾಗುತ್ತಿದೆ. ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತಿದೆ. ಯಾವುದೇ ರೀತಿಯ ಅಪರಾಧಗಳ ಬಗ್ಗೆ ಮಾಹಿತಿ ಪಡೆಯಲು , ಪ್ರಕರಣಗಳನ್ನು ಪತ್ತೆ ಮಾಡಲು ಸಹಾಯವಾಗುತ್ತದೆ. ಮೊಬೈಲ್ ಕಳ್ಳತನ, ಪಿಕ್ ಪಾಕೇಟ್, ಸಣ್ಣ ಪುಟ್ಟ ಅಪರಾಧಗಳನ್ನು ನಿಗ್ರಹಿಸಬಹುದಾಗಿದೆ. ಸಾರ್ವಜನಿಕ ಶಾಂತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ಹಿತದೃಷ್ಠಿಯಿಂದ ಸಂಶಯಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇರಿಸಲು ಸಹಾಯವಾಗುತ್ತದೆ.

 

CC CAMERA

ಇತ್ತೀಚಿನ ನವೀಕರಣ​ : 27-12-2020 12:26 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಶಿವಮೊಗ್ಗ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ