ಅಭಿಪ್ರಾಯ / ಸಲಹೆಗಳು

ಶಿವಮೊಗ್ಗ ಬಗ್ಗೆ

ಶಿವಮೊಗ್ಗ ಜಿಲ್ಲೆ ಸಂಕ್ಷಿಪ್ತ ನೋಟ:-


ಶಿವಮೊಗ್ಗ ಜಿಲ್ಲೆಯು ಕನರ್ಾಟಕ ರಾಜ್ಯದ ದಕ್ಷಿಣ ಭಾಗದ ಮಧ್ಯದಲ್ಲಿ ಪಶ್ಚಿಮಕ್ಕೆ ಹಬ್ಬಿಕೊಂಡಿದ್ದು, ಐತಿಹಾಸಿಕವಾಗಿಯೂ ಕಲೆ ಮತ್ತು ಸಂಸ್ಕೃತಿಯಿಂದಲೂ, ವಿಪುಲವಾದ ನೈಸಗರ್ಿಕ ಸಂಪತ್ತಿನಿಂದಲು ಶಿವಮೊಗ್ಗ ಜಿಲ್ಲೆ ಹೆಸರು ಪಡೆದಿದೆ. ಇದು ರಾಜ್ಯದ ದಕ್ಷಿಣ ಭಾಗದ ಮಧ್ಯದಲ್ಲಿ ಪಶ್ಚಿಮಕ್ಕೆ ಹಬ್ಬಿಕೊಂಡಿದೆ. ಶಿವಮೊಗ್ಗ ಎಂಬ ಹೆಸರಿನ ಬಗ್ಗೆ ಅನೇಕ ನಂಬಿಕೆಗಳು ಇಲ್ಲಿನ ಜನತೆಯಲ್ಲಿ ಇದೆ. ಶಿವ-ಮುಖ ಎಂಬುದು ಶಿವಮೊಗ್ಗ ಆಯಿತೆಂದು, ಶಿವನ-ಮೊಗ್ಗೆ ಎಂಬುದು ಶಿವಮೊಗ್ಗ ಎಂಬುದು ಆಯಿತೆಂದು ನಂಬಿಕೆ ಇದೆ. ದುವರ್ಾಸ ಮುನಿಗಳು ಸಿಹಿಮೊಗ್ಗೆ (ಜೇನುತುಪ್ಪ) ಮಡಿಕೆಯಲ್ಲಿ ಇರಿಸಿಕೊಂಡು ಬಳಸುತ್ತಿದ್ದುದರಿಂದ ಸಿಹಿ-ಮೊಗ್ಗೆ ಎಂಬ ಹೆಸರು ಬಂದು ಕ್ರಮೇಣ ಇದು ಶಿವಮೊಗ್ಗ ಆಯಿತೆಂಬ ಪ್ರತೀತಿ ಇದೆ.


ಶಿವಮೊಗ್ಗ ಜಿಲ್ಲೆಯ ಪಶ್ಚಿಮ ಭಾಗದ ಪಶ್ಚಿಮ ಘಟ್ಟಗಳ ಅತಿಯಾದ ಮಳೆಯಿಂದ, ಸಹ್ಯಾದ್ರಿ ಉತ್ತುಂಗ ಪರ್ವತ ಶ್ರೇಣಿಗಳಿಂದ ದಟ್ಟವಾದ ಅರಣ್ಯದಿಂದ ನಯನ ಮನೋಹರವಾಗಿದ್ದು, ಪಶ್ಚಿಮದಿಂದ ಪೂರ್ವಕ್ಕೆ ಮಲೆನಾಡು, ಅರೆ ಮಲೆನಾಡು ಆಗಿ ಪರಿವತರ್ಿತವಾಗಿದೆ. ಭಾರತದ ಜಗತ್ಪ್ರಸಿದ್ದ ಪ್ರವಾಸಿ ಆಕರ್ಷಣಿಯ ಜೋಗ್ ಜಲಪಾತ ಜಿಲ್ಲೆಯ ವಿಶೇಷ ಆಕರ್ಷಣೆಯಾಗಿದೆ.

ಐತಿಹಾಸಿಕ ಹಿನ್ನೆಲೆ:-


ಶಿವಮೊಗ್ಗ ಜಿಲ್ಲೆಯು ಮೌರ್ಯ ಸಾಮ್ರಾಜ್ಯದ ಭಾಗವಾಗಿತ್ತೆಂದು ಚರಿತ್ರೆಯ ದಾಖಲೆ ತಿಳಿಸುತ್ತದೆ. ಕ್ರಿ.ಶ.ಮೂರನೇ ಶತಮಾನದಲ್ಲಿ ಶಾತವಾಹನರ ಆಡಳಿತಕ್ಕೊಳಪಟ್ಟಿತ್ತು.ಸುಮಾರು ಕ್ರಿ.ಶ.4ನೇ ಶತಮಾನದಲ್ಲಿ ಬನವಾಸಿ ಕದಂಬರು ಅರಸರಾಗಿದ್ದರು. ಕದಂಬರು ಪಶ್ಚಿಮ ಭಾಗದಲ್ಲಿ ಆಳುತ್ತಿದ್ದರೆ, ಪೂರ್ವ ಭಾಗವು ತಲಕಾಡಿನ ಗಂಗರಸರ ಆಡಳಿತಕ್ಕೆ ಒಳಪಟ್ಟಿತ್ತು. ಕ್ರಿ.ಶ.6ನೇ ಶತಮಾನದಲ್ಲಿ ಬಾದಾಮಿಯ ಚಾಲುಕ್ಯರು ಕದಂಬ ಮತ್ತು ಗಂಗರಸರನ್ನು ಸೋಲಿಸಿ ತಮ್ಮ ಸಾಮ್ರಾಜ್ಯದ ಮಾಂಡಲಿಕ ರಾಜರನ್ನಾಗಿಸಿ ಈ ರಾಜರು ಆಡಳಿತ ಮುಂದುವರೆಸಿದರು. ನಂತರ ಗಂಗರಸರು ಜಿಲ್ಲೆಯ ಬಹು ಪ್ರದೇಶವನ್ನು ಕಳೆದುಕೊಂಡರು. 7ನೇ ಶತಮಾನದಲ್ಲಿ ಸಂತ ದೇವನೆಂಬ ಜೈನ ಪಾಳೆಗಾರನು ಹುಂಚಾದಲ್ಲಿ ರಾಜ್ಯ ಸ್ಥಾಪಿಸಿದನು. 8ನೇ ಶತಮಾನದಲ್ಲಿ ಮಾಳಖೇಡದ ರಾಷ್ಟ್ರಕೂಟರು ಇಲ್ಲಿ ಮತ್ತು ಬೇರೆ ಪ್ರದೇಶದಲ್ಲಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿದರು. 11ನೇ ಶತಮಾನದಲ್ಲಿ ಹೊಯ್ಸಳರು ಪ್ರಬಲರಾಗಿ ಜಿಲ್ಲೆಯನ್ನಾಳಿದರು. ಹೊಯ್ಸಳರ ಮತ್ತು ಯಾದವರ ಮಧ್ಯ ನಡೆದ ಅನೇಕ ಯುದ್ಧಗಳಿಂದಾಗಿ ಉತ್ತರದ ಸ್ವಲ್ಪಭಾಗವು ಅಲ್ಪ ಸಮಯದವರೆಗೆ ಯಾದವರ ಅಧೀನದಲ್ಲಿತ್ತು. 12ನೇ ಶತಮಾನದಲ್ಲಿ ಅಲ್ಪಕಾಲದಲ್ಲಿ ಕಲಚೂರಿನ ರಾಜರ ಆಡಳಿತದಲ್ಲಿತ್ತು.


ಕ್ರಿ.ಶ.14ನೇ ಶತಮಾನದಲ್ಲಿ ಹೊಯ್ಸಳರ ಆಳ್ವಿಕೆ ಕೊನೆಗೊಂಡ ನಂತರ ಜಿಲ್ಲೆಯು ವಿಜಯ ನಗರ ಸಾಮ್ರಾಜ್ಯ ಭಾಗವಾಗಿತ್ತು. ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅರಗ ಈ ಸಾಮ್ರಾಜ್ಯದ ರಾಜಧಾನಿಯಾಗಿತ್ತು.


ಕ್ರಿ.ಶ.16ನೇ ಶತಮಾನದ ಪ್ರಾರಂಭದಲ್ಲಿ ಕೆಳದಿಯ ನಾಯಕರು ಪ್ರಾಬಲ್ಯವಾಗಿ ರಾಜ್ಯವಾಳಿದರು. ಇವರು ಬಹುಕಾಲದವರೆಗೆ ರಾಜ್ಯವಾಳುತ್ತಿದ್ದರು. ಇವರಲ್ಲಿ ಕೆಳದಿಯ ಶಿವಪ್ಪನಾಯಕನ ಆಡಳಿತ ಉತ್ತಮವಾಗಿತ್ತೆಂದು ತಿಳಿದು ಬರುತ್ತದೆ.ಕ್ರಿ.ಶ.1763 ರಲ್ಲಿ ಹೈದರಾಲಿಯು ಕೆಳದಿಯ ನಾಯಕರನ್ನು ಸೋಲಿಸಿ, ಕೆಳದಿ ನಾಯಕರ ರಾಜಧಾನಿಯಾದ ಬಿದನೂರನ್ನು ವಶಪಡಿಸಿಕೊಂಡಿದ್ದರಿಂದ ಈ ಜಿಲ್ಲೆಯು ಇತರ ಪ್ರದೇಶಗಳೊಂದಿಗೆ ಮೈಸೂರು ರಾಜ್ಯಾಧಿಪತ್ತಿಗೊಳಗಾಯ್ತು. ಕ್ರಿ.ಶ.1799 ರಲ್ಲಿ ಮೈಸೂರು ಅರಸರು ಒಡೆಯರ ಕಾಲದಲ್ಲಿ ನಗರ ಪೌಜದಾರಿಯಲ್ಲಿ ಈಗಿನ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಸೇರಿದ್ದವು. ಜಿಲ್ಲೆಯ ಭೂ ಕ್ಷೇತ್ರ ಆಡಳಿತ ಅನೇಕ ಮಾಪರ್ಾಡಾಗಳಾಗಿ 1951ರಲ್ಲಿ ಶಿವಮೊಗ್ಗ ಜಿಲ್ಲೆ ಅಸ್ವಿತ್ವಕ್ಕೆ ಬಂದಿತು.


1997 ರಲ್ಲಿ ಚನ್ನಗಿರಿ ಮತ್ತು ಹೊನ್ನಾಳಿ ತಾಲ್ಲೂಕುಗಳನ್ನು ದಾವಣಗೆರೆ ಜಿಲ್ಲೆಗೆ ಸೇರಿಸಿದ್ದರಿಂದ ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯು ಪುನಃ ಮಾಪರ್ಾಡಾಗಿ ಈಗಿನ ಶಿವಮೊಗ್ಗ ಜಿಲ್ಲೆಯು 7 ತಾಲ್ಲೂಕುಗಳನ್ನು ಹೊಂದಿರುತ್ತದೆ.

ಭೌಗೋಳಿಕ ನೆಲೆ:-


ಶಿವಮೊಗ್ಗ ಜಿಲ್ಲೆಯಲ್ಲಿ ಹಿತಕರವಾದ ಹವಾಮಾನವಿದ್ದು, ಪಶ್ಚಿಮ ಭಾಗದಲ್ಲಿ ಹೆಚ್ಚು ತಂಪಾಗಿಯು, ಪೂರ್ವ ಭಾಗದಲ್ಲಿ ಹೆಚ್ಚು ಉಷ್ಣವಾಗಿಯು ಇರುತ್ತದೆ. ಜಿಲ್ಲೆಯ ಗರಿಷ್ಠ ಉಷ್ಣಾಂಶ 42.42 ಇದ್ದರೆ ಕನಿಷ್ಠ 10.8 ಸೆಂಟಿಗ್ರೇಡ್ ಇರುತ್ತದೆ. ಜಿಲ್ಲೆಯ ವಾಡಿಕೆಯ ಸರಾಸರಿ ಮಳೆ 1813 ಮಿ.ಮಿ. ಆಗಿದ್ದು, ಹೆಚ್ಚು ಮಳೆ ಬೀಳುವ ಆಗುಂಬೆಯಲ್ಲಿ ವಾಡಿಕೆ ಮಳೆ 7421.6 ಮಿ.ಮಿ ಆಗಿದೆ.ಉತ್ತರ ಅಕ್ಷಾಂಶ 13.27 ರಿಂದ 14.39 ಮತ್ತು ಪೂರ್ವ ರೇಖಾಂಶ 74.37 ರಿಂದ 75.52 ಜಿಲ್ಲೆಯ ಕ್ಷೇತ್ರ ವ್ಯಾಪ್ತಿ ಇದ್ದು, ಇದರ ಉದ್ದಳತೆ ಪೂರ್ವದಿಂದ ಪಶ್ಚಿಮಕ್ಕೆ ಅಂದಾಜು 152.9 ಕಿ.ಮೀ. ಮತ್ತು ದಕ್ಷಿಣಕ್ಕೆ ಉತ್ತರದಿಂದ 128.8 ಕಿ.ಮೀ. ಆಗುತ್ತದೆ. ಪೂರ್ವಕ್ಕೆ ದಾವಣಗೆರೆ ಜಿಲ್ಲೆ, ದಕ್ಷಿಣಕ್ಕೆ ಚಿಕ್ಕಮಗಳೂರು ಜಿಲ್ಲೆ, ಪಶ್ಚಿಮಕ್ಕೆ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆ ಮತ್ತು ಉತ್ತರದಲ್ಲಿ ಉತ್ತರ ಕನ್ನಡ ಮತ್ತು ಹಾವೇರಿ ಜಿಲ್ಲೆಗಳು ಈ ಜಿಲ್ಲೆಯ ಸೀಮೆಗಳಾಗಿವೆ.


ಸ್ವಾಭಾವಿಕ ಲಕ್ಷಣಗಳು:-


ಜಿಲ್ಲೆಯ ಹೆಚ್ಚಿನ ಪ್ರದೇಶ ಮಲೆನಾಡಾಗಿದೆ. ಜಿಲ್ಲೆಯ ದಕ್ಷಿಣೋತ್ತರವಾಗಿ ಪ್ರಸಿದ್ಧ ಸಹ್ಯಾದ್ರಿ ಪಶ್ಚಿಮ ಘಟ್ಟಗಳು ಹಬ್ಬಿವೆ. ಇದರಲ್ಲಿ ಕೊಡಚಾದ್ರಿ ಅತ್ಯಂತ ಎತ್ತರವಾದ ಶಿಖರವಾಗಿದೆ. ಸಮುದ್ರ ಮಟ್ಟದಿಂದ 4,411 ಅಡಿ ಎತ್ತರದಲ್ಲಿದೆ. ಜಿಲ್ಲೆಯಲ್ಲಿ ಕೋಗಾರ, ಹುಲಿಕಲ್ ಮತ್ತು ಆಗುಂಬೆ ಘಟ್ಟ ಪ್ರದೇಶಗಳಾಗಿವೆ. ಜಿಲ್ಲೆಯಲ್ಲಿ ಮುಖ್ಯವಾಗಿ ಕೆಂಪುಗೋಡು, ಮರಳು ಮಿಶ್ರಿತ, ಕೆಂಪು, ಲ್ಯಾಟರಾಯಿಟಿ ಜಂಬಿಟ್ಟಗೆ ಮತ್ತು ಕಪ್ಪು ಮಣ್ಣುಗಳನ್ನು ಒಳಗೊಂಡಿರುತ್ತದೆ. ಜಿಲ್ಲೆಯಲ್ಲಿ ವಾಡಿಕೆ ಮಳೆಯು 1818.9 ಮಿಲಿ ಮೀಟರ್ಗಳಲ್ಲಿ ಇರುತ್ತದೆ. ಎತ್ತರವಾದ ಪರ್ವತ ಶ್ರೇಣಿಗಳು, ದಟ್ಟವಾದ ಅರಣ್ಯದಿಂದ ಜಿಲ್ಲೆಯ ಪಶ್ಚಿಮ ಭಾಗದಲ್ಲಿ ನೈರುತ್ಯ ಮಾರುತಗಳಿಂದ ಅಧಿಕ ಮಳೆಯಾಗುತ್ತದೆ. ರಾಜ್ಯದಲ್ಲಿ ಅತ್ಯಂತ ಹೆಚ್ಚು ಮಳೆಯಾಗುವ ಆಗುಂಬೆಯನ್ನು ದಕ್ಷಿಣ ಭಾರತದ ಚಿರಾಪುಂಜಿ ಎಂದು ಕರೆಯಲಾಗುತ್ತದೆ. ಜಿಲ್ಲೆಯ ಪಶ್ಚಿಮದಿಂದ ಪೂರ್ವಕ್ಕೆ ಇಳಿಜಾರಾಗಿದೆ. ತೀರ್ಥಹಳ್ಳಿ, ಹೊಸನಗರ, ಸಾಗರ ಮತ್ತು ಸೊರಬ ತಾಲ್ಲೂಕುಗಳು ಮಲೆನಾಡು ಭಾಗಕ್ಕೆ ಸೇರಿವೆ. ಇಲ್ಲಿ ಎತ್ತರವಾದ ಗುಡ್ಡಗಳು ಹೆಚ್ಚಾಗಿವೆ. ಶಿವಮೊಗ್ಗ, ಶಿಕಾರಿಪುರ ಮತ್ತು ಭದ್ರಾವತಿ ತಾಲ್ಲೂಕುಗಳನ್ನು ಅರೆಮಲೆನಾಡು ಎಂದು ಕರೆಯಲಾಗುತ್ತದೆ.

ನದಿಗಳು:-


ಶಿವಮೊಗ್ಗ ಜಿಲ್ಲೆಯಲ್ಲಿ ಹರಿಯುವ ನದಿಗಳಲ್ಲಿ ತುಂಗಾ, ಭದ್ರಾ, ಶರಾವತಿ, ಕುಮುದ್ವತಿ, ವರದಾ ನದಿಗಳು ಮುಖ್ಯವಾಗಿವೆ. ಈ ನದಿಗಳಲ್ಲಿ ಶರಾವತಿ ನದಿಯು ಮಾತ್ರ ಪಶ್ಚಿಮಾಭಿಮುಖವಾಗಿ ಹರಿಯುತ್ತದೆ. ಶಿವಮೊಗ್ಗ ತಾಲ್ಲೂಕಿನ ಕೂಡ್ಲಿ ಎಂಬಲ್ಲಿ ತುಂಗಾ ಮತ್ತು ಭದ್ರಾ ನದಿಗಳು ಸಂಗಮವಾಗಿ ತುಂಗಭಧ್ರಾ ಎಂದು ಹೆಸರು ಪಡೆದು ದಾವಣಗೆರೆ ಜಿಲ್ಲೆಯನ್ನು ಪ್ರವೇಶಿಸುತ್ತದೆ. ಕುಮದ್ವತಿ ಮತ್ತು ವರದಾ ನದಿಗಳು ತುಂಗಾಭದ್ರಾ ನದಿಯ ಉಪನದಿಗಳಾಗಿವೆ. ಶರಾವತಿ ನದಿಯು ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥ ಎಂಬಲ್ಲಿ ಉಗಮವಾಗಿ, ತೀರ್ಥಹಳ್ಳಿ ಹೊಸನಗರ ಮತ್ತು ಸಾಗರ ತಾಲ್ಲೂಕುಗಳಲ್ಲಿ ಹರಿದು ಮುಂದೆ ಸಾಗರಕ್ಕೆ 30 ಕಿ. ಮೀ. ದೂರದಲ್ಲಿ 960 ಅಡಿ ಎತ್ತರದಿಂದ ಕೆಳಕ್ಕೆ ಧುಮುಕಿ ಜಗತ್ಪತ್ರಸಿದ್ದ ಜೋಗ ಜಲಪಾತವಾಗಿದೆ. ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುಚ್ಚಕ್ತಿ ಉತ್ಪಾದನೆಗೆ ದೊಡ್ಡ ಅಣೆಕಟ್ಟು ಕಟ್ಟಿ ಜಲಾಶಯ ನಿಮರ್ಿಸಲಾಗಿದೆ. ಮುಂದೆ ಈ ನದಿಯು ಉತ್ತರ ಕನ್ನಡ ಜಿಲ್ಲೆಯಲ್ಲಿ ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತದೆ.

ಇತ್ತೀಚಿನ ನವೀಕರಣ​ : 23-12-2020 07:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಶಿವಮೊಗ್ಗ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ